
ನಗರದ ಕಮ್ಮಗೊಂಡನಹಳ್ಳಿಯ ನಾರ್ಥ್ ಬೆಂಗಳೂರು ಎಜುಕೇಷನಲ್ ಟ್ರಸ್ಟ್ ಆಶ್ರಯದಲ್ಲಿ ಎಂ.ಎನ್. ಟೆಕ್ನಿಕಲ್ ಕಾಲೇಜಿನಲ್ಲಿ ನಡೆದ ತೃತೀಯ ವರ್ಷದ ಡಿಪ್ಲೊಮೋ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಕಾಲೇಜಿನ ಮುಖ್ಯಸ್ಥರಾದ ಸರೋಜಿನಿ ಪ್ರಸಾದ್‌ರವರು ಉದ್ಘಾಟಿಸಿದರು. ಕಾರ್ಯದರ್ಶಿ ಡಾ. ಡಿ.ಎನ್. ಹರಿದಾಸ್, ಹೊಂಬೇಗೌಡ ಶಿಕ್ಷಣ ಸಂಸ್ಥೆಯ ನಿವೃತ್ತ ಶಿಕ್ಷಕಿ ಭಾರತಿ, ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ, ಮ್ಯಾಜಿಷಿಯನ್ ನಾಗೇಂದ್ರ ಪ್ರಸಾದ್, ಸಂಸ್ಥೆಯ ಖಜಾಂಚಿ ಜಿ. ರಾಜೇಂದ್ರ, ನಿರ್ದೇಶಕ ಬಿ.ಎಸ್. ಲಕ್ಷ್ಮೀಶ, ಎಂಎನ್‌ಟಿಐ ಪ್ರಾಂಶುಪಾಲ ಬಸಪ್ಪ, ಎನ್‌ಬಿಪಿಯು ಪ್ರಾಂಶುಪಾಲ ಚಂದ್ರಪ್ಪ, ಪಿಪಿಎ ಶಾಲೆಯ ಮುಖ್ಯೋಪಾಧ್ಯಾಯಿನಿ ಜ್ಯೋತಿ ಶ್ರೀ ಪಿ. ದೇಶಪಾಂಡೆ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



























