ಹುಬ್ಬಳ್ಳಿ ಮಹಾನಗರ ಆದ್ಯಂತ ಇಂದು ವೈಭವದಿಂದ ರಾಮನವಮಿಯನ್ನು ಆಚರಿಸಲಾಯಿತು. ನಗರದ ಮರಾಠಾ ಗಲ್ಲಿಯಲ್ಲಿರುವ ಹನುಮನ ಮಂದಿರದಲ್ಲಿ ಮಹಿಳೆಯರು ಶ್ರೀ ರಾಮನಿಗೆ ತೊಟ್ಟಿಲಲ್ಲಿ ಹಾಕಿ ರಾಮನವಮಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮರಾಠಾ ಶ್ರೀ ಭಾರತಿ ಮಠ ಟ್ರಸ್ಟ್ ಸಮಿತಿಯ ಕಾರ್ಯದರ್ಶಿ ನಾರಾಯಣ ವೈದ್ಯ. ಧರ್ಮದರ್ಶಿ ಬಸವಂತ ಸಿಂದೆ. ಮಂದಿರದ ವ್ಯವಸ್ಥಾಪಕ ಹನುಮಂತ ಆರ್ಯರ ಭಕ್ತರು ಉಪಸ್ಥಿತರಿದ್ದರು.