
ಶಿರುಗುಪ್ಪಿ ಗ್ರಾಮದ ತ್ಯಾಗವೀರ ಶಿರಸಂಗಿ ಲಿಂಗರಾಜ ಯುವಕ ಮಂಡಲ ಹಾಗೂ ಗ್ರಾಮಸ್ಥರ ಆಶ್ರಯದಲ್ಲಿ ದಾನ ಶೂರ ಶಿರಸಂಗಿ ಲಿಂಗರಾಜ್ ದೇಸಾಯಿ ಜಯಂತೋತ್ಸವ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿತು. ಪರಮಪೂಜ್ಯ ಶ್ರೀಗಳು ಸಾನಿಧ್ಯ ವಹಿಸಿದ್ದರು, ಮಲ್ಲಪ್ಪ ಅಣ್ಣಿಗೇರಿ, ಶಾಸಕ ಎನ್ ಎಚ್ ಕೋನರಡ್ಡಿ, ಅಣ್ಣಿಗೇರಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ದೇವರಾಜ ಬ. ದಾಡಿಬಾವಿ, ಶಾಂತಯ್ಯ ಹೊಸಮಠ, ಜಕ್ಕಪ್ಪ ಮಲ್ಲಾಡ, ಉಪನ್ಯಾಸಕರಾಗಿ ವಿರೂಪಾಕ್ಷಿ ಗೌಡ ಪಾಟೀಲ್ ಹಾಗೂ ಸಮಾಜದ ಮುಖಂಡರು, ಗ್ರಾಮಸ್ಥರು, ಯುವಕರು ಉಪಸ್ಥಿತರಿದ್ದರು.




























