
ಕಲಬುರಗಿ: ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟ (ಎಐಎಫ್‍ಎಡಬ್ಲ್ಯುಎಚ್) ಸಂಘಟನೆಯ ನೆತೃತ್ವದಲ್ಲಿ ಇಂದು ಕೇಂದ್ರದ 2026-27ನೇ ಸಾಲಿನ ಬಜೆಟ್ ನಲ್ಲಿ ಅಂಗನವಾಡಿ ಮತ್ತು ಇತರ ಸ್ಕೀಮ ವರ್ಕರಗಳು ಮತ್ತು ಮೂಲಭೂತ ಸೇವೆಗಳ ದುಸ್ಥಿತಿ ಹಾಗೂ ಹಕ್ಕುಗಳ ಬಗ್ಗೆ ಮಾರಣಾಂತಿಕ ಮೌನ ವಹಿಸಿರುವುದನ್ನು ಬಲವಾಗಿ ಖಂಡಿಸಿ ಜನವಿರೋಧಿ ಕೇಂದ್ರದ ಬಜೆಟ್ ಪ್ರತಿಯ ನಕಲಿಗೆ ಬೆಂಕಿಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಿಸಲಾಯಿತು. ಎಂ.ಬಿ ಸಜ್ಜನ, ಗೌರಮ್ಮ ಪಾಟೀಲ, ರತ್ನ, ಶೇಖಮ್ಮ, ನೇತ್ರಾವತಿ, ಶಾಂತಾ, ಅನುಸೂಯಾ, ರೇಣುಕಾ, ನಿರ್ಮಲಾ, ಶಿವಲಿಲಾ, ಇರ್ಫಾನಾ ಶೇಖ, ಶಾಹೀನ ಬೇಗಂ ಸೇರಿದಂತೆ ಹಲವರಿದ್ದರು.























