ಕಲಬುರಗಿ: ವಾರದಲ್ಲಿ ಐದುದಿನಗಳ ಕೆಲಸದ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೊಳಿಸುವಂತೆ ಆಗ್ರಹಿಸಿ ಇಂದು ನಗರದ ಕೆನರಾ ಬ್ಯಾಂಕ್ ಎದುರಿಗೆ ಯೂನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಕಲಬುರಗಿ ಘಟಕದ ವತಿಯಿಂದ ಮುಷ್ಕರ ನಡೆಸಲಾಯಿತು. ರವಿಗೌಡ,ನವೀನ್ ಕೆ,ಚಂದ್ರಮೋಹನ್,ತಿಮ್ಮಾರೆಡ್ಡಿ,ಸತೀಶ್ ಚವ್ಹಾಣ,ರವಿಶಂಕರ್ ಸೇರಿದಂತೆ ಹಲವಾರು ಬ್ಯಾಂಕ್ ನೌಕರರು ಪಾಲ್ಗೊಂಡರು.