ಕಲಬುರಗಿ: ನಗರದ ಸಂಗತ್ರಾಸವಾಡಿ ವೀರಭದ್ರೇಶ್ವರ ದೇವಸ್ಥಾನದ 56 ನೇ ಜಾತ್ರಾ ಮಹೋತ್ಸವದ ಅಂಗವಾಗಿ ಶೀಲವಂತ ಅಕ್ಕಸಾಲಿ ಸಮಾಜ ಸಂಘದ ವತಿಯಿಂದ ಇಂದು ಮಾಯಾಮಂದಿರದಿಂದ ವೀರಭದ್ರೇಶ್ವರ ದೇವಸ್ಥಾನದವರೆಗೆ ಅದ್ಧೂರಿಯಿಂದ ಕುಂಭಮೇಳ ಮೆರವಣಿಗೆ ಜರುಗಿತು.ಶ್ರೀ ವೀರಭದ್ರೇಶ್ವರ ಜಾತ್ರಾ ಸಮಿತಿ ಪದಾಧಿಕಾರಿಗಳು, ಸಮಾಜದ ಮುಖಂಡರು,ಮಹಿಳೆಯರು ಪಾಲ್ಗೊಂಡರು.