ಕಲಬುರಗಿ: ಬಿಜೆಪಿ ಕಚೇರಿಯಲ್ಲಿ 77ನೇ ಗಣರಾಜ್ಯೋತ್ಸವ ನಿಮಿತ್ತ ಪಕ್ಷದ ನಗರ ಜಿಲ್ಲಾ ಅಧ್ಯಕ್ಷ ಚಂದು ಪಾಟೀಲ ಧ್ವಜಾರೋಹಣ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ, ಮುಖಂಡರಾದ ಶಿವರಾಜ ಎಳಿಮೇಲಿ, ಅಂಬಾರಾಯ ಅಷ್ಠಗಿ, ಉಮೇಶ ಪಾಟೀಲ, ಶಿವಯೋಗಿ ನಾಗನಳ್ಳಿ, ಎಸ್.ಜಿ.ಭಾರತಿ, ಶೋಭಾ ಬಾಣಿ ಸೇರಿದಂತೆ ಮತ್ತಿತರರು ಇದ್ದರು.