ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ರಸ್ತೆಯಲ್ಲಿರುವ ಪೇಠ ಬಣ ವ್ಯಾಪ್ತಿಯ ಇಟಿಕೆರೆಯನ್ನು ಸಂರಕ್ಷಿಸಿ ಒತ್ತುವರಿಯನ್ನು ತೆರವುಗೊಳಿಸಿ ಕೆರೆಯನ್ನು ಉಳಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಸಾಹಿತಿ ಪೂರ್ಣಜಿ ಕರಾಟೆಯವರು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಗದಗ ಜಿಲ್ಲಾ ಉಪ ವಿಭಾಗಾಧಿಕಾರಿ ಗಂಗಪ್ಪ ಅವರಿಗೆ ಸಲ್ಲಿಸಿದರು. ಮನವಿ ಪತ್ರದಲ್ಲಿ ಐತಿಹಾಸಿಕವಾದ ಈಕೆರೆ ಈಗ ಅಳಿವಿನ ಅಂಚಿನಲ್ಲಿದ್ದು, ಮೊದಲಿನಂತೆ ಕೆರೆಯನ್ನು ಉಳಿಸಬೇಕು ಎಂದು ಆಗ್ರಹಿಸಿದ್ದಾರಲ್ಲದೆ ಈ ಕೆರೆಯನ್ನು ಮುಚ್ಚುವ ಹುನ್ನಾರವಿದ್ದು ಕೂಡಲೇ ಜಿಲ್ಲಾ ಆಡಳಿತ ಮಧ್ಯಪ್ರವೇಶಿಸಿ ಕೆರೆಯನ್ನು ಉಳಿಸಬೇಕು ಇಲ್ಲದಿದ್ದರೆ ಹೋರಾಟದ ಹಾದಿ ಅನಿವಾರ್ಯವಾಗುತ್ತದೆ ಎಂದು ಹೇಳಿದ್ದಾರೆ.