
ಕಲಬುರಗಿ:ಅನಧಿಕೃತ ಬೈಕ್, ಟ್ಯಾಕ್ಸಿ ಮತ್ತು ಅನಧಿಕೃತ ಆಟೋಗಳ ಸಂಚಾರ ತಡೆಯುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಆಟೋ ಚಾಲಕರ ಸಂಘದ ನೇತೃತ್ವದಲ್ಲಿ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಇಂದು ಆಟೋ ಸಮೇತ ಮೆರವಣಿಗೆ ನಡೆಸಲಾಯಿತು. ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ಮಾಲಿಪಾಟೀಲ, ಕಾರ್ಯದರ್ಶಿ ಶ್ರೀಮಂತ ಬೋಳೆವಾಡ, ಸಂಘಟನಾ ಕಾರ್ಯದರ್ಶಿ ಬಸವರಾಜ ಅಟ್ಟೂರಕರ್, ಸದಸ್ಯರಾದ ಪವನಕುಮಾರ, ಸೈಯದ್ ಜಮೀರ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




























