
ಕಲಬುರಗಿ:ನಿನ್ನೆ ಸಂಜೆ ಅಲಂಕೃತಗೊಂಡ ಸದ್ಗುರು ಶ್ರೀ ಕೋರಿಸಿದ್ದೇಶ್ವರರ ಮಹಾರಥೋತ್ಸವಕ್ಕೆ ಪೀಠಾಧಿಪತಿಗಳಾದ ಪರಮಪೂಜ್ಯ ಡಾ:ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಪೂಜೆ ಸಲ್ಲಿಸಿ , ರಥಾರೂಡರಾದ ನಂತರ ಸದ್ಗುರು “ಶ್ರೀ ಕೋರಿಸಿದ್ದೇಶ್ವರ ಮಹಾರಾಜ ಕಿ ಜಯ” ಎಂಬ ಜಯಘೋಷದೊಂದಿಗೆ ಭಕ್ತಿ ಭಾವದಿಂದ ಭಕ್ತರು ಬಾಳೆಹಣ್ಣು,ಉತ್ತತಿಯನ್ನು ರಥದ ಮೇಲೆ ಎಸೆಯುವದರ ಮೂಲಕ ಸದ್ಗುರುವಿನ ರಥೋತ್ಸವ ವೈಭವದಿಂದ ಜರುಗಿತು.

























