
ಕಲಬುರಗಿ: ನಗರದ ಕೆಎಚ್‍ಬಿ ಅಕ್ಕಮಹಾದೇವಿ ಕಾಲೋನಿ ಬಾಸ್ಕೆಟ್‍ಬಾಲ್ ಅಂಕಣದಲ್ಲಿಂದು ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್, ಕಲಬುರಗಿ ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ ಕರ್ನಾಟಕ ಬಾಸ್ಕೆಟ್ ಬಾಲ್ ಗ್ರಾಮೀಣ ಲೀಗ್ ಚಾಂಪಿಯನ್‍ಶಿಫ್ ( ಕೆಬಿಎಲ್ ) ಅನ್ನು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿದರು.ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್‍ಡಿ,ಡಾ.ಪ್ರತಾಪಸಿಂಗ್ ತಿವಾರಿ, ಸಂಗಮೇಶ್ವರ,ಮಲ್ಲಿಕಾರ್ಜುನ ಉದನೂರ,ರಾಮೇಶ್ವರ ಭಾಟಿ,ಸುಶೀಲಕುಮಾರ ಮಾಮಡಿ,ಡಾ.ಅಮರೇಶ ಬಿರಾದಾರ,ಡಾ.ಬಸವೇಶ ಪಾಟೀಲ ,ದಯಾನಂದಸ್ವಾಮಿ ಹಿರೇಮಠ ಅವರು ಸೇರಿದಂತೆ ಹಲವರಿದ್ದರು.


























