ಹುಬ್ಬಳ್ಳಿಯಲ್ಲಿ ನಡೆದ ಸೌಥ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಹುಬ್ಬಳ್ಳಿ-ಧಾರವಾಡ ಗೋಜು ರ್ಯೂ ಕರಾಟೆ ಡು ಕೆನರ್ಯೂಕಾನ್ ಸಂಸ್ಥೆಯ 200 ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಬಾಚಿ ಸಮಗ್ರ ಪ್ರಶಸ್ತಿಯೊಂದಿಗೆ ಚಾಂಪಿಯನಶಿಪ್ ಟ್ರೋಫಿಯನ್ನು ಪಡೆದಿದ್ದಾರೆ. ಚಿತ್ರದಲ್ಲಿ ಮುಖ್ಯ ತರಬೇತುದಾರ ಅಣ್ಣಪ್ಪ ಮರಕಾಲ ಹಾಗೂ ತರಬೇತುದಾರರಾದ ಶಿಹಾನ್ ವಿನೋದ ಭಾಂಡಗೆ, ಸೆನ್ಸಯಿ ಖುಷ್ಬೂ ಜೈನ್, ಸೆನ್ಸಯಿ ಆನಂದ ಮರಕಾಲ, ಶಿಹಾನ್ ವಿಶ್ವನಾಥ ಕುಡತರಕರ, ಸೆನ್ಸಯಿ ಬಸವರಾಜ ಭದ್ರಾಪೂರ, ಸೆನ್ಸಯಿ ಅಲೆಕ್ಷ್ ಡೆವಿಡ್, ಸೆನ್ಸಯಿ ವಿನಯ, ಶಿಹಾನ್ ಗಂಗಾಧರ ಉಪ್ಪಿನ ಅವರನ್ನು ಕಾಣಬಹುದು.