
ಕಲಬುರಗಿ: ಹೊರಗುತ್ತಿಗೆ ಎಲ್ಲ ನೌಕರರಿಗೆ ತಕ್ಷಣವೇ ತಾತ್ಕಾಲಿಕ ನೇಮಕಾತಿ ಆದೇಶ ವಿತರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ನೆತೃತ್ವದಲ್ಲಿ ನಗರದ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ಕೈಗೊಂಡು ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಯಿತು. ಸಂಘಟನೆಯ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಜಿಲ್ಲಾಧ್ಯಕ್ಷ ಪರಶುರಾಮ ಹಡಲಗಿ ಮುಖಂಡರಾದ ಮೇಘರಾಜ ಕಠಾರೆ, ಕಾಶಿನಾಥ ಬಂಡಿ, ನಾಗರತ್ನ ಮಧನಕರ್, ಕಲ್ಯಾಣಿ ಎನ್.ಪೂಜಾರಿ, ನರಸಮ್ಮ ಚಂದನಕೇರಾ, ಬಾಬು ಹೊಸಮನಿ ಸೇರಿದಂತೆ ಹೊರಗುತ್ತಿಗೆ ನೌಕರರು ಭಾಗವಹಿಸಿದ್ದರು.






















