
ರಬಕವಿ ಬನಹಟ್ಟಿ ತಾಲೂಕಿನ ರಬಕವಿ ರಾಮಪುರ ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಮುಧೋಳನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕನ್ನಡ ಮತ್ತು ಹಿಂದಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಮತ್ತು ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಇವರಿಗೆ ಸಂಸ್ಥೆಯ ಚೇರ್ಮನ್ನರಾದ ಎಸ್ ವಿ ಮೇಣಿ, ವೈಸ್ ಚೇರ್ಮನ್ನರಾದ ಆರ್. ಎಸ್. ಸಿಂಘನ್, ಕಾರ್ಯದರ್ಶಿಗಳಾದ ಶಕೀಲ್ ಎಂ. ನದಾಫ, ಮುಖ್ಯೋಪಾಧ್ಯಾಯರಾದ ಎಸ್. ಬಿ. ಹಟ್ಟಿ ಹಾಗೂ ಭೋದಕ ಮತ್ತು ಭೋದಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದರು.


























