ಕಲಬುರಗಿ:ಜಿಲ್ಲಾಡಳಿತ, ಜಿ.ಪಂ., ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ತಾ.ಪಂ.ಸಹಯೋಗದೊಂದಿಗೆ ನಗರದ ತಾ.ಪಂ.ಆವರಣದಲ್ಲಿ ಇಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ-2025-26ರನ್ನು ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಉದ್ಘಾಟಿಸಿದರು. ಜಿ.ಪಂ.ಡಿಆರ್‍ಡಿಎ ಯೋಜನಾ ನಿರ್ದೇಶಕ ಜಗದೇವಪ್ಪ ಬಿ., ಎಂ.ಡಿ.ಅಜೀಮ್, ನಾಗಾಬಾಯಿ ದೊಡ್ಡಮನಿ, ವಿಕಾಸ ಸಜ್ಜನ್, ಪವನಕುಮಾರ, ಎಂ.ಡಿ.ಸೈಯದ್ ಪಟೇಲ್, ನಂದಕಿಶೋರ ಗಾಯಕವಾಡ ಇದ್ದರು. ಉದ್ಯೋಗ ಮೇಳದಲ್ಲಿ ಭಾಗವಹಿಸಿದ ಉದ್ಯೋಗಾಕಾಂಕ್ಷಿಗಳನ್ನು ಚಿತ್ರದಲ್ಲಿ ಕಾಣಬಹುದು.