ಬೆಂಗಳೂರು ನಗರ ಜಿಲ್ಲೆಯ ಉತ್ತರ ಮತ್ತು ದಕ್ಷಿಣ ಉಪವಿಭಾಗಾಧಿಕಾರಿಗಳ ಕಚೇರಿಯ ಕಂದಾಯ ದಾಖಲಾತಿಗಳ ಸ್ಕ್ಯಾನಿಂಗ್ ಮತ್ತು ಡಿಜಟಲೀಕರಣಗೊಳಿಸುವ ಭೂಸುರಕ್ಷಾ ಯೋಜನೆಯನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ಇಂದು ನಗರದ ಕಂದಾಯ ಭವನದ ಬೆಂ. ಉತ್ತರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಉದ್ಘಾಟಿಸಿದರು. ಪ್ರಿನ್ಸಿಪಲ್ ಸೆಕ್ರಿಟರಿ ರಾಜೇಂದ್ರ ಕುಮಾರ್ ಕಟಾರಿಯ, ಜಿಲ್ಲಾಧಿಕಾರಿ ಜಗದೀಶ್, ಎಡಿಸಿ ಜಗದೀಶ್ ನಾಯಕ್ ಮತ್ತಿತರರು ಇದ್ದಾರೆ.