ಕಲಬುರಗಿ: ಮಹಾನಗರ ಪಾಲಿಕೆ ವತಿಯಿಂದ ಬಬಲಾದ ಮಠದಲ್ಲಿ ಇಂದು ವಾರ್ಡ್ ನಂ.1, 2 ಮತ್ತು 5ರ ಸಾರ್ವಜನಿಕ ಕುಂದುಕೊರತೆಗಳನ್ನು ಸ್ಥಳದಲ್ಲಿಯೇ ಬಗೆ ಹರಿಸುವ ಪ್ರಯುಕ್ತ “ಜನಸ್ಪಂದನ” ಕಾಂiÀರ್iಕ್ರಮ ನಡೆಸಲಾಯಿತು. ಮಹಾಪೌರರಾದ ವರ್ಷಾ ರಾಜೀವ್ ಜಾನೆ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ವಲಯ ಆಯುಕ್ತ ಮುಜಾಮಿಲ್ ಆಲಂ ಮತ್ತು ಬಡಾವಣೆಗಳ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.