
ಇಂದು ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಸಂಜೆವಾಣಿಯ ಆಕರ್ಷಕ 2026ರ ನೂತನ ಹೊಸ ವರ್ಷದ ಕ್ಯಾಲೆಂಡರ್ ಅನ್ನು ಸಂಸ್ಥಾಪಕರಾದ ಶ್ರೀ ಡಾ.ಭಾಷ್ಯಂ ಸ್ವಾಮೀಜಿರವರು ಬಿಡುಗಡೆ ಮಾಡಿದರು. ಚಿತ್ರದಲ್ಲಿ ದೇವಸ್ಥಾನದ ಆಡಳಿತ ಅಧಿಕಾರಿ ಶ್ರೀನಿವಾಸ್, ಸಂಜೆವಾಣಿ ಮೈಸೂರು ಆವೃತ್ತಿಯ ವ್ಯವಸ್ಥಾಪಕರಾದ ಹರೀಶ್ ಕುಮಾರ್ ಸಿಂಗ್ ಹಾಗೂ ಇನ್ನಿತರರನ್ನು ಕಾಣಬಹುದು.




























