
ಕಲಬುರಗಿ: ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದ ನಿರ್ದೇಶಕರಾಗಿ ಆಯ್ಕೆಯಾದ ಶಿವಶರಣಯ್ಯ ಮಠಪತಿ ಮತ್ತು ಜಿಲ್ಲಾ ಕೇಂದ್ರ ಸಗಟು ಮಾರಾಟ ಮಳಿಗೆ ನಿಯಮಿತದ ನಿರ್ದೇಶಕರಾಗಿ ಆಯ್ಕೆಯಾದ ಸಿದ್ರಾಮಪ್ಪ ಪಾಟೀಲ ಅವರನ್ನು ಶ್ರೀ ಬಸವೇಶ್ವರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಸಂಘದ ಉಪಾಧ್ಯಕ್ಷ ಸಿದ್ಧರಾಮ ಮಹಾಂತಗೋಳ ಅವರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಎಲ್ಲ ನಿರ್ದೇಶಕರು ,ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
























