ಕಲಬುರಗಿ: ನಾಡಿನ ಹಿರಿಯ ಸಾಹಿತಿಗಳಾದ ಚೆನ್ನವೀರ ಕಣವಿ ಹಾಗೂ ಪೆÇ್ರ. ಚಂದ್ರಶೇಖರ ಪಾಟೀಲ ಅವರ ಸಂಪುಟಗಳ ಲೋಕಾರ್ಪಣೆ ಹಾಗೂ ಉಚಿತ ಪುಸ್ತಕ ವಿತರಣಾ ಸಮಾರಂಭ ಹಾಗೂ ಮನೆಗೊಂದು ಗ್ರಂಥಾಲಯ ಕಲಬುರಗಿ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಣಾ ಸಮಾರಂಭ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಇಂದು ನಡೆಯಿತು. ಕುಲಪತಿ ಪೆÇ್ರ.ಶಶಿಕಾಂತ ಎಸ್. ಉಡಿಕೇರಿ ಅವರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ಪೆÇ್ರ.ಎಸ್.ಜಿ. ಸಿದ್ಧರಾಮಯ್ಯ, ಡಾ.ಜಿ.ಎಂ.ಹೆಗಡೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಡಾ. ಬಸವರಾಜ ಸಬರದ, ಪೆÇ್ರ.ಎಚ್.ಟಿ. ಪೆÇೀತೆ, ನೀಲಾ ಪಾಟೀಲ್, ಪ್ರಿಯದರ್ಶಿ ಕಣವಿ, ಡಾ.ಮಂಜುನಾಥ ಟಿ., ಡಾ. ಸುರೇಶ ಜಂಗೆ, ಸಿಂಡಿಕೇಟ್ ಸದಸ್ಯ ಉದಯ ಬಿ. ಪಾಟೀಲ್, ಪ್ರೊ.ರಮೇಶ ಲಂಡನಕರ್, ಬಿ.ಹೆಚ್.ನಿರಗುಡಿ, ಕೆ.ಬಿ.ಕಿರಣ್ ಸಿಂಗ್, ಲಕ್ಷ್ಮಣ ಕೊಡಸೆ, ಡಾ.ಶರಣಬಸಪ್ಪ ಕೋಲ್ಕಾರ, ಡಾ.ಬಿ.ಸಿ.ಕುಶಾಲ, ಕೆ.ಅಕ್ಷತಾ ಇದ್ದರು.