
ನವದೆಹಲಿಯ ಕನ್ನಡ ಸಂಘದ ಆಡಿಟೋರಿಯಂನಲ್ಲಿ ಇಂದು ನಡೆದ ಪದ್ಮವಿಭೂಷಣ, ರಾಷ್ಟ್ರಕವಿ ಕುವೆಂಪು ಅವರ ಸಾಧನೆಗಳು ಮತ್ತು ಗ್ರಂಥಾಲಯದ ಕೊಡುಗೆಗಳ ವಿಚಾರ ಸಂಕಿರಣವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಉದ್ಘಾಟಿಸಿದರು. ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ನಂಜಾವಧೂತ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಶಾಸಕ ಟಿ.ಬಿ.ಜಯಚಂದ್ರ, ಅಧ್ಯಕ್ಷ ಸಿ.ಎಂ. ನಾಗರಾಜು, ಕಾರ್ಯದರ್ಶಿ ರಾಧಾಕೃಷ್ಣ, ಅಧ್ಯಕ್ಷ ರಾಮು ಮತ್ತಿತರರು ಇದ್ದಾರೆ.




























