ಕಲಬುರಗಿ: ಆಲ್ ಇಂಡಿಯಾ ಎಸ್‍ಸಿ,ಎಸ್‍ಟಿ ರೈಲ್ವೆ ನೌಕರರ ಸಂಘದ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಯಿತು. ಮಾಜಿ ಎಂಎಲ್‍ಸಿ ಅಮರನಾಥ ಪಾಟೀಲ , ಡಿಎಸ್ ಎಸ್ ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ,ಡಾ.ಸಚಿನ್ ಬನಸೋಡೆ,ಡಾ.ಶ್ರವಣಕುಮಾರ,ಶಿವಕುಮಾರ, ಕಲ್ಯಾಣಕುಮಾರ ಗಟ್ಟು,ಹಣಮಂತ ಬೋದನಕರ್,ಅವಿನಾಶ ಕಂಠಿ,ವಿನೋದಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹಲವಾರು ನೌಕರರು ರಕ್ತದಾನ ಮಾಡಿದರು.