ಆಲ್ ಇಂಡಿಯಾ ವರ್ಕರ್ ಕೋ-ಆರ್ಡಿನೇಷನ್ ಸಮಿತಿ ವತಿಯಿಂದ ಶಾಸಕರ ಭವನದಲ್ಲಿ ರಾಷ್ಟ್ರಮಟ್ಟದ ಕಾರ್ಮಿಕರ ಸಭೆ ನಡೆಯಿತು. ರಾಷ್ಟ್ರೀಯ ಅಧ್ಯಕ್ಷ ಬೈಯ್ಯಪ್ಪನಹಳ್ಳಿ ಡಾ. ಡಿ. ರಮೇಶ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ರಾಷ್ಟ್ರದ ಯುವ ಅಧ್ಯಕ್ಷ ಸೈಯದ್ ಮೊಸಿನ್, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಸುಜೇಂದ್ರಶೆಟ್ಟಿ ಹಾಗೂ ವಿವಿಧ ರಾಜ್ಯಗಳ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.