
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಭಾರತರತ್ನ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ ಮಹಾಪರಿನಿರ್ವಾಣ ದಿನದ ಅಂಗವಾಗಿ ಧಾರವಾಡದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಪುತ್ಥಳಿಗೆ ಮಹಾಪೌರರಾದ ಜ್ಯೋತಿ ಪಾಟೀಲ ಸಭಾನಾಯಕರು ಮಾಜಿಮಹಾಪೌರರಾದ ಈರೇಶ ಅಂಚಟಗೇರಿ ಮಾಲಾರ್ಪಣೆ ಮಾಡಿ ಪುಷ್ಪನಮನಗಳನ್ನು ಸಲ್ಲಿಸಿದರು. ಶಂಕರಗೌಡ ಪಾಟೀಲ, ಅರವಿಂದ ಜಮಖಂಡಿ, ಗಂಗಾಧರ ಹಾಗೂ ಬಸವರಾಜ ಗರಗ ಅಂಬೇಡ್ಕರ್ ಅನುಯಾಯಿಗಳು ಉಪಸ್ಥಿತರಿದ್ದರು.
























