
ಕಲಬುರಗಿ: ಹಾಸ್ಟೆಲ್‍ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ವಾರಕ್ಕೊಂದು ರಜೆ, ಕೆಲಸದ ಅವಧಿ ನಿಗದಿ ಪಡಿಸುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿಯಿಂದ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ,ಪರಶುರಾಮ ಹಡಗಲಿ,ಕಾಶೀನಾಥ ಬಂಡಿ,ಮೇಘರಾಜ ಕಠಾರೆ,ನಾಗರತ್ನ ಮದನಕರ , ಕಲ್ಯಾಣಿ ಪೂಜಾರಿ ,ನರಸಮ್ಮ ಚಂದನಕೇರಾ ಸೇರಿದಂತೆ ಹಲವರು ಪಾಲ್ಗೊಂಡರು.























