
ನಗರದ ಕಮಲಾ ನಗರದ ಗೌತಮ್ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ, ಪಂಡಿತ್
ಜವಾಹರ್‍ಲಾಲ್ ನೆಹರುರವರ ಜನ್ಮದಿನಾಚರಣೆಯನ್ನು ಸಂಸ್ಥಾಪಕ ಅಧ್ಯಕ್ಷ ಎಟಿಎಸ್ ಗಿರಿ ಅವರ ನೇತೃತ್ವದಲ್ಲಿ ಆಚರಿಸಲಾಯಿತು. ನೆಹರು ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಕೇಕ್ ಕತ್ತರಿಸಿ ಶಾಲೆ ಎಲ್ಲಾ ಮಕ್ಕಳು ಸಂಭ್ರಮದಿಂದ ಆಚರಿಸಿದರು. ಇದೇ ಸಂದರ್ಭದಲ್ಲಿ ಸಿಹಿ ತಿಂಡಿಯನ್ನು ವಿತರಿಸಲಾಯಿತು.























