ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ, ಬಿಜೆಪಿ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷರಾದ ನಾಗರತ್ನ ಬಳ್ಳಾರಿ ಇವರ ನೇತೃತ್ವದಲ್ಲಿ ಒನಕೆ ಓಬವ್ವ ಜಯಂತಿಯನ್ನು ಹುಬ್ಬಳ್ಳಿ ಅರವಿಂದ ನಗರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪೂರ್ವ ಕ್ಷೇತ್ರದ ಮಂಡಲದ ಅಧ್ಯಕ್ಷ ಮಂಜುನಾಥ ಕಾಟಕರ್, ಮಹಾನಗರ ಪಾಲಿಕೆಯ ಸದಸ್ಯರುಗಳಾದ ದುರ್ಗಮ್ಮ ಬಿಜವಾಡ, ಶಾಂತ ಹಿರೇಮಠ್, ನೀಲಕಂಠ ತಡಸದಮಠ, ಆನಂದ್ ಮಾದರಿ, ನಿಂಗರಾಜ ಮುಂದಿನಮನೆ, ಭಾರತಿ ಯಾಲ್ಕನ್, ಮಹಾಲಕ್ಷಿ÷್ಮ ಸಣ್ಣಗೌಡ್ರು, ವಸಂತ ಬುರುಡೆ, ಮೀನಾಕ್ಷಿ ಬಡಿಗೇರ, ಸರೋಜಾ ಶಾಂತಿಗಿರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.