
ಕಲಬುರಗಿ: ತಳವಾರ ಜಾತಿಯವರಿಗೆ ಪರಿಶಿಷ್ಟ ಪಂಗಡದ ಹಕ್ಕು ನೀಡುವಂತೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ತಳವಾರ ಸಮಾಜದಿಂದ ಅಫಜಲಪುರ ಶಾಸಕ ಎಂ.ವೈ ಪಾಟೀಲ ಅವರ ನಿವಾಸದ ಎದುರು ಧರಣಿ ನಡೆಸಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಮಾಜದ ಪೂಜ್ಯರು,ರಾಜ್ಯಾಧ್ಯಕ್ಷ ಡಾ.ಸರ್ದಾರ ರಾಯಪ್ಪ, ಲಚ್ಚಪ್ಪ ಜಮಾದಾರ ಅವರು ಸೇರಿದಂತೆ ಹಲವರಿದ್ದರು.
























