ಕಲಬುರಗಿ: ಬಸವಕಲ್ಯಾಣದಲ್ಲಿ ನವೆಂಬರ್ 29,30 ರಂದು ವಿಶ್ವಬಸವಧರ್ಮ ಟ್ರಸ್ಟ್ ವತಿಯಿಂದ ಆಯೋಜಿಸಲಾದ 46 ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವದ ಆಹ್ವಾನ ಪತ್ರಿಕೆಯನ್ನು ನಗರದ ಅನುಭವ ಮಂಟಪದಲ್ಲಿಂದು ಲೋಕಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು,ಕೆಕೆಆರ್‍ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ರವೀಂದ್ರ ಶಾಬಾದಿ ಹಾಗೂ ಬಸವಾಭಿಮಾನಿಗಳು ಸೇರಿದಂತೆ ಹಲವರಿದ್ದರು.