
೧೯೧೬ ಕಾಲಾವಧಿಯಲ್ಲಿ ಆಗಿನ ಮದ್ರಾಸ್ ಸರಕಾರದ , ಉಪ್ಪಿನಂಗಡಿ ತಾಲೂಕು ವಕ್ಕೆತ್ತೂರು ಗ್ರಾಮದಲ್ಲಿ ಭೂಮಾಲಕರಾದ ಬೈಪದವು ಶ್ರೀ ಮಹಾಲಿಂಗ ಭಟ್ ಮತ್ತು ಶ್ರೀಮತಿ ಸರಸ್ವತಿಯಮ್ಮ ನವರ ಮಗ ಭೀಮ್ ಭಟ್ ರವರ ಸಹಧರ್ಮಿಣಿ ಯಾದ ಶ್ರೀಮತಿ ಪದ್ಮಾವತಿಯಮ್ಮನವರಿಂದ ವಾರ್ಷಿಕ ಗೇಣಿಗೆ ಬೇಸಾಯ ಮಾಡುತ್ತಿದ್ದ ನಾಯ್ತೊಟ್ಟು ಶ್ರೀ ಸುಬ್ಬಗೌಡ ಮತ್ತು ಶ್ರೀ ಮಹಾಲಿಂಗ ಗೌಡರ ಸಹೋದರರಲ್ಲಿ ಕಿರಿಯರಾದ ಶ್ರೀ ಮಹಾಲಿಂಗ ಗೌಡರು ಸುಮಾರು ೧೧೦ ವರ್ಷಗಳ ಹಿಂದೆ ಆಗಿನ ವಕ್ಕೆತ್ತೂರು ಗ್ರಾಮದಲ್ಲಿ ಪ್ರಪ್ರಥಮವಾಗಿ ಭಾಷಾ ಮಿಷನ್ ನಿನ ಹಂಚಿನ ಮನೆಯನ್ನು ಮಣ್ಣಿನ ಗೋಡೆಯಲ್ಲಿ ನಿರ್ಮಿಸಿರುತ್ತಾರೆ…
ಅದಾಗಿ ೮೪ ವರ್ಷಗಳ ನಂತರ ೨೦೦೦ನೇ ಇಸವಿಯಲ್ಲಿ ಸದರಿ ಮನೆಯನ್ನು ಜೀರ್ಣೋದ್ಧಾರಗೊಳಿಸಿ ಮನೆಯ ಎದುರುಬದಿಯ ಬೃಹತ್ ಗಾತ್ರದ ಮರದ ಕಿಟಕಿಗಳನ್ನು ತೆರವುಗೊಳಿಸಿ ಮೇಲಿನ ಚಿತ್ರದಲ್ಲಿ ಕಾಣಿಸುತ್ತಿರುವ ಕಿಟಕಿಗಳನ್ನು ಇರಿಸಲಾಗಿದೆ…
ಇದೀಗ ಈ ಮನೆಯ ನಾಲ್ಕನೇ ತಲೆಮಾರಿನ ಅಂದರೆ ಮಹಾಲಿಂಗ ಗೌಡರ ಹಿರಿಯ ಪುತ್ರ ಕೊರಗ ಗೌಡ , ಕೊರಗ ಗೌಡರ ಪ್ರಥಮ ಪುತ್ರ ಕಾಂತಪ್ಪ ಗೌಡ , ಕಾಂತಪ್ಪ ಗೌಡರ ಏಕೈಕ ಪುತ್ರ ಹಾಗೂ ಸದರಿ ಕುಟುಂಬದ ಎರಡನೆಯ ಹಿರಿಯ ಸದಸ್ಯರಾದ ಶ್ರೀಯುತ ಚೆನ್ನಪ್ಪ ಗೌಡರ ಕಿರಿಯ ಮಗನಾದ ಚಂದ್ರಶೇಖರವರು ನೂತನ ಗ್ರಹ ನಿರ್ಮಾಣದ ವ್ಯವಸ್ಥೆಗೋಸ್ಕರ ಈ ಸುಮಾರು ೧೧೦ ವರ್ಷಗಳ ಇತಿಹಾಸವಿರುವ ಗ್ರಾಮದ ಮೊದಲ ಹಂಚಿನ ಮನೆಯೆಂಬ ಹೆಗ್ಗಳಿಕೆಯನ್ನು ಪಡೆದಿರುವ ಮನೆಯನ್ನು ತೆರವುಗೊಳಿಸಲಿದ್ದಾರೆ…
ಈ ಒಂದು ಮನೆಯಿಂದ ವಿಭಾಗವಾಗಿ ೧೪ ಮನೆಗಳು ನಿರ್ಮಾಣವಾಗಿದ್ದು , ೧೫ನೇ ನೂತನ ಮನೆಯಾಗಿ ಇದೇ ಸ್ಥಳದಲ್ಲಿ ನಿರ್ಮಾಣವಾಗಲಿದೆ…
ಐದು ತಲೆಮಾರುಗಳನ್ನು ಕಂಡ ಈ ಮನೆ ದಿನಾಂಕ ೪/೪/ ೨೦೨೬ ರಿಂದ ಇತಿಹಾಸದ ಪುಟ ಸೇರಲಿದೆ…























