
ಕರ್ನಾಟಕ ರಾಜ್ಯ ಕಂಡ ಹೆಮ್ಮೆಯ ಮಾಜಿ ಮುಖ್ಯಮಂತ್ರಿಗಳು ಹಾಲಿ ಕೇಂದ್ರ ಸಚಿವರಾದ ಶ್ರೀಯುತ ಕುಮಾರಸ್ವಾಮಿಯವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಉನ್ನತ ಶಿಕ್ಷಣ ಇಲಾಖೆಗೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ವೈದ್ಯಕೀಯ, ಆಯುರ್ವೇದ ಶಿಕ್ಷಣ ಶಾಲಾ ಶಿಕ್ಷಣ ಇಲಾಖೆಯ ಒಟ್ಟಾರೆ ಶಿಕ್ಷಣಕ್ಕೆ ಪೂರಕವಾದ ಇಲಾಖೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಆಗಬೇಕಾಗಿರುವ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿ ಇದಕ್ಕೆ ಪೂರಕವಾದ ಕೆಲಸ ಕಾರ್ಯಗಳನ್ನು ರಾಜ್ಯದ ಪ್ರತಿನಿಧಿಯಾಗಿ ತಾವು ತ್ವರಿತವಾಗಿ ಮಾಡಿಸಿಕೊಡುವಂತೆ ಎಂ.ಎಲ್.ಸಿ ವಿವೇಕಾನಂದ ಕೋರಿಕೊಳ್ಳಲಾಯಿತು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಕುಮಾರಣ್ಣನವರು ರಾಜ್ಯದಿಂದ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳು ಬಂದಿರುವ ಮಾಹಿತಿಗಳನ್ನು ಪಡೆದುಕೊಂಡು ಶೀಘ್ರವಾಗಿ ಈ ವಿಚಾರವಾಗಿ ಕಾರ್ಯಯೋನ್ಮುಖ ನಾಗುತ್ತೇನೆಂದು ತಿಳಿಸಿದರು.






























