ಕೋಲಾರ, ೭- ನಗರ ಸುಂದರಿಕರಣ ಕುರಿತು ವಿವಿಧ ವೃತ್ತ ಗಳಲ್ಲಿ ಆಗಬೇಕಾದ ಅಭಿವೃದ್ಧಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲು ಹಾಗೂ ಸೂಕ್ತ ನಿರ್ದೇಶನಗಳನ್ನು ನೀಡಲು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ತಡರಾತ್ರಿ ನಗರ ಪರಿವಿಕ್ಷಣೆ ನಡೆಸಿದರು. ಈಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಂಬರೀಷ್, ಆಯುಕ್ತ ನವೀನ್ ಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು