ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ನೂತನ ೬೬ ಕಸ ಸಂಗ್ರಹ ಆಟೋ ಟಿಪ್ಪರ್‌ಗಳನ್ನು ಮೇಯರ್ ಜ್ಯೋತಿ ಪಾಟೀಲ ಉದ್ಘಾಟಿಸಿದರು. ಉಪಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಆಯುಕ್ತ ರುದ್ರೇಶ ಗಾಳಿ, ಈರೇಶ ಅಂಚಟಗೇರಿ, ರಾಜಣ್ಣ ಕೊರವಿ, ಶಂಕರ ಶೆಳಕೆ ಹಾಗೂ ರೂಪಾ ಶೆಟ್ಟಿ ಸೇರಿದಂತೆ ಪಾಲಿಕೆ ಸದಸ್ಯರು ಇದ್ದರು.