ಏಕಾತ್ಮಮಾನವ ದರ್ಶನದ ಕರ್ತೃ ಜನಸಂಘದ ಸಂಸ್ಥಾಪಕರು ಪಂಡಿತ ದೀನದಯಾಳ ಉಪಾಧ್ಯಾಯ ಅವರ ಜಯಂತಿ ಅಂಗವಾಗಿ ಧಾರವಾಡದ ಮಹಾತ್ಮ ಬಸವೇಶ್ವರ ನಗರದಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಮಾಜಿಮಹಾಪೌರರು ಸಭಾನಾಯಕರು ಈರೇಶ ಅಂಚಟಗೇರಿ ಪುಷ್ಪನಮನಗಳನ್ನು ಸಲ್ಲಿಸಿದರು. ಜಿಲ್ಲಾ ಉಪಾಧ್ಯಕ್ಷೆ ರಾಜೇಶ್ವರಿ ಅಳಗವಾಡಿ, ಬಸು ಬಾಳಗಿ, ಶೋಭಾ ಜಾಧವ, ಪ್ರಣಿತ ರಾಮನಗೌಡರ, ಸಂಗಮೇಶ ಹನಸಿ, ಪಳೋಟಿ ಪಕಿರಪ್ಪ ಪಾಟೀಲ, ಹಂಜಿಯವರು ಹಾಗೂ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.



























