ಕರ್ನಾಟಕ ರಾಜ್ಯ ಸರ್ಕಾರವು ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕನ್ನಡ ಜಾಗೃತಿ ಸಮಿತಿಗೆ ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷರಾದ ಎಂ.ಮೋಹನ್ ಕುಮಾರ್ ಗೌಡ ಅವರನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದು, ಈ ಸಂದರ್ಭದಲ್ಲಿ ಕರ್ನಾಟಕ ಕಾವಲುಪಡೆ ವತಿಯಿಂದ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಈ ಸಂಧರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ.ರವಿಗೌಡ, ರಾಜ್ಯ ಕಾರ್ಯದರ್ಶಿ ಟಿ.ರವೀಂದ್ರ, ರಾಜ್ಯ ಕಾರ್ಯದರ್ಶಿ ಹಾಗೂ ವಕೀಲರಾದ ಡಿ.ಆರ್.ಕರೀಗೌಡ, ಮುಖಂಡರಾದ ರಾಜಣ್ಣ, ಬಿ. ಮಹದೇವು, ದತ್ತು ರಾಜಕುಮಾರ್, ಭೂಮಿನಾಗರಾಜ್, ದರ್ಶನ್ ಕುಮಾರ್ ಗೌಡ, ಕಾಳಪ್ಪ, ಅನಂದರಾಜೆಅರಸ್, ಕುಮಾರ್, ಯೋಗೇಶ್ ಇತರರು ಹಾಜರಿದ್ದು ಶುಭ ಕೋರಿದರು.