ಕಲಬುರಗಿ: ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಅಂಗವಾಗಿ ಜಿಮ್ಸ್ ಆಸ್ಪತ್ರೆ ಆವರಣದಿಂದ ಅನ್ನಪೂರ್ಣ ಕ್ರಾಸ್‍ವರೆಗೆ ಹಮ್ಮಿಕೊಂಡಿದ್ದ ಜಾಥಾಕ್ಕೆ ಕಲಬುರಗಿ ವಿಭಾಗದ ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿಯ ಉಪ ನಿರ್ದೇಶಕರಾದ ಡಾ.ಶರಣಬಸಪ್ಪ ಗಣಜಲಖೇಡ ಚಾಲನೆ ನೀಡಿದರು. ಡಿಹೆಚ್‍ಒ ಡಾ.ಶರಣಬಸಪ್ಪ ಕ್ಯಾತನಾಳ್, ಡಾ.ವಿವೇಕಾನಂದ ರಡ್ಡಿ, ಡಾ.ಪ್ರಭುಕಿರಣ್ ಗೋಗಿ, ಡಾ.ಮಹಮ್ಮದ್ ಇರ್ಫಾನ್ ಸೇರಿದಂತೆ ಮತ್ತಿತರರು ಇದ್ದರು.