ಕಲಬುರಗಿ: ನಗರದ ಸರಾಫ ಸಂಘದ 81 ವರ್ಷದ ಪುರಾತನ ಶ್ರೀ ಭಾರತೀಯ ಗಣೇಶ ಮಂದಿರಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಭೇಟಿ ನೀಡಿ, ಶ್ರೀವರಸಿದ್ಧಿವಿನಾಯಕ ದೇವರ ದರ್ಶನ,ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಸರಾಫ ಸಂಘದ ಅಧ್ಯಕ್ಷ ರಾಘವೇಂದ್ರ ಮೈಲಾಪುರ ಅವರು ಜಿಲ್ಲಾಧಿಕಾರಿಗಳಿಗೆ ಶಾಲು ಹೊದಿಸಿ, ಗಣೇಶಮೂರ್ತಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ವೆಂಕಟೇಶ ಅಮ್ಮಣ್ಣ,ಕೇಶವ ಸೀತನೂರ,ಶ್ರೀನಿವಾಸ ನೋಕ್ಜಾ,ರಾಹನೋಜ ಮುಂದಡಾ,ಆನಂದ ಶೀಲವಂತ,ಬಂಗಾರಪ್ಪ ಪೋದ್ದಾರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.























