ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಯಾತ್ರೆ ಅಂಗವಾಗಿ ’ಸಂಜೆವಾಣಿ’ ಕಾರ್ಯಾಲಯಕ್ಕೆ ತಿರಂಗ ಧ್ವಜವನ್ನು ವಿತರಿಸಲಾಯಿತು. ಸಂಪಾದಕರ ಪರವಾಗಿ ಹಿರಿಯ ಪತ್ರಕರ್ತ ಹೇಮಂತ್‌ಕುಮಾರ್.ಎಂ ಧ್ವಜವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಮಾಧ್ಯಮ ಸಮಿತಿ ಸದಸ್ಯರಾದ ಅಚ್ಚುತ್, ವೈದ್ಯಕೀಯ ಪ್ರಕೋಷ್ಠ ಸಮಿತಿಯ ಡಾ. ಲಕ್ಷ್ಮಣ್, ರಾಜ್ಯ ಸದಸ್ಯರಾದ ಜಗನ್ಮೋಹನರೆಡ್ಡಿ, ರೈತ ಮೋರ್ಚಾದ ರತನ್‌ಸೇಠ್, ಮಾಧ್ಯಮ ಸಂಚಾಲಕರಾದ ಕರುಣಾಕರ ಖಾಸ್ಲೆ ಇದ್ದರು.

























