ಡಾ ವಿಷ್ಣು ಸೇನಾ ಸಮಿತಿ ಧಾರವಾಡ ಜಿಲ್ಲಾ ಘಟಕ ಹುಬ್ಬಳ್ಳಿ ವತಿಯಿಂದ ಕನ್ನಡ ಚಿತ್ರರಂಗದ ದಿಗ್ಗಜ, ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ಡಾ ವಿಷ್ಣುವರ್ಧನ್ ರವರ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ಪುಣ್ಯಭೂಮಿ (ಸಮಾಧಿ)ಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ ಎಂದು ಖಂಡಿಸಿ ಡಾ. ವಿಷ್ಣುಸೇನಾ ಸಮಿತಿ ವತಿಯಿಂದ ಹುಬ್ಬಳ್ಳಿಯ ಬೃಂದಾವನ ಸರ್ಕಲದಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಲಾಯಿತು.