ಕಲಬುರಗಿ: ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನ ಮತ್ತು ಧರ್ಮಾಧಿಕಾರಿ ಪೂಜ್ಯ ಡಾ ವೀರೇಂದ್ರ ಹೆಗಡೆಯವರ ಬಗ್ಗೆ, ಕೆಲ ದುಷ್ಟ ಶಕ್ತಿಗಳು ನಿರಂತರವಾಗಿ ವ್ಯವಸ್ಥಿತ ಸಂಚು ರೂಪಿಸಿ ಕ್ಷೇತ್ರದ ಪಾವಿತ್ರತೆಗೆ ಮತ್ತು ಹೆಗಡೆ ಅವರ ಘನ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕಿ ತರುವ ಕಾರ್ಯದಲ್ಲಿ ನಿರತರಾಗಿದ್ದು ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಸಕಲ ಜೈನ ಸಮಾಜದಿಂದ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಮಾಜಿ ಸಂಸದ ಡಾ.ಉಮೇಶ ಜಾಧವ,ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ,ನಾಗನಾಥ ಚಿಂದೆ,ಪ್ರಕಾಶ ಜೈನ್,ದೀಪಕ ಪಂಡಿತ,ವಜ್ರಕುಮಾರ ಪಾಟೀಲ,ಸುರೇಶ ತಂಗಾ,ರಾಹುಲ ಶಹಾ,ಅರಿಹಂತ ಪಾಟೀಲ ಸೇರಿದಂತೆ ಸಮಾಜದ ಹಲವರು ಪಾಲ್ಗೊಂಡರು.