ಧಾರವಾಡದ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಸಮುದಾಯ ಭವನದಲ್ಲಿ ರವಿವಾರ ಜರುಗಿದ ಧಾರವಾಡ ಜಾನಪದ ನುಡಿ ಸಂಭ್ರಮ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಮಾಜ ಸೇವಕ ಡಾ.ರಮೇಶ್ ಮಹಾದೇವಪ್ಪನವರರಿಗೆ ರಾಷ್ಟ್ರೀಯ ಮಟ್ಟದ ಉತ್ತಮ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವಧೂತ ಮಹರ್ಷಿ ಸಿದ್ಧಾರ್ಥ ಸ್ವಾಮೀಜಿ ಸಾ,ಚನ್ನಾಪುರ, ಮೃತ್ಯುಂಜಯ ವಸ್ತ್ರದ, ಡಾ. ಮಲ್ಲಯ್ಯ ಅತ್ತನೂರು, ಡಾ. ಮಂಜುಳಾ ಪಾವಗಡ, ಡಾ. ಹನುಮಂತಪ್ಪ ಹರಿಜನ್, ಡಾ. ನಾಗರಾಜ್ ತಂಬ್ರಹಳ್ಳಿ, ನಟ ಹಾಸ್ಯ ಕಲಾವಿದ ರಾಜು ತಾಳಿಕೋಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

























