ಕಲಬುರಗಿ: ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ,ಮಾಜಿ ಉಪಪ್ರಧಾನಮಂತ್ರಿ ಡಾ.ಬಾಬು ಜಗಜೀವನ ರಾಮ್ ಅವರ 39 ನೇ ಪುಣ್ಯಸ್ಮರಣೆ ಅಂಗವಾಗಿ ಇಂದು ನಗರದಲ್ಲಿ ಬಾಬು ಜಗಜೀವನ ರಾಮ್ ಅವರ ಪ್ರತಿಮೆಗೆ ಗಣ್ಯರು ಗೌರವ ಸಮರ್ಪಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ,ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೆÇಲೀಸ್ ಆಯುಕ್ತ ಡಾ.ಶರಣಪ್ಪ ಎಸ್ ಡಿ,ಎಸ್.ಪಿ ಆಡೂರು ಶ್ರೀನಿವಾಸಲು,ಜಿಪಂ ಸಿಇಒ ಭಂವರಸಿಂಗ್ ಮೀನಾ,ಮಹಾನಗರ ಪಾಲಿಕೆ ಆಯುಕ್ತ ಸಿಂಧೆ ಅವಿನಾಶ್ ಸಂಜೀವನ್,ರಾಜು ವಾಡೇಕರ್, ಚಂದ್ರಿಕಾ ಪರಮೇಶ್ವರ್, ಗೀತಾ ರಾಜು ವಾಡೇಕರ್,ದಶರಥ ಕಲ್ಗುರ್ತಿ,ರಂಜೀತ್,ಗೋಪಿ ಕೃಷ್ಣ ಮತ್ತು ಇತರರು ಉಪಸ್ಥಿತರಿದ್ದರು.