ಕಲಬುರಗಿ: ತ್ರಿಭಾಷಾ ನೀತಿ ಕೈಬಿಟ್ಟು, ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ತರಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ನೆತೃತ್ವದಲ್ಲಿ ಪ್ರತಿಭಟನೆ ಕೈಗೊಂಡು ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಡಳಿತದ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಆನಂದ ಎಸ್.ದೊಡ್ಡಮನಿ, ಮಹೇಶ ಕಾಶಿ, ಪ್ರವೀಣ ಕಟ್ಟಿಮನಿ, ಕಾಶಿನಾಥ ಮಂದೇವಾಲ, ಆಸೀಫ ನಿಂಬಾಳಕರ, ಸಂತೋಷ ಚೌಹಾಣ, ಅಪ್ಪರಾವ ಕ್ಷೇತ್ರಿ, ಮೌನೇಶ ಬೆನಕಿನಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.