ನಗರದ ಹೆಚ್‌ಆರ್‌ಬಿಆರ್ ಲೇ ಔಟ್, ಭಾರತ ರತ್ನ ಶ್ರೀ ಎಂ. ವಿಶ್ವೇಶ್ವರಯ್ಯ, ಕಲ್ಯಾಣ ನಗರ, ಬಾಣಸವಾಡಿ ಗ್ರಾಮದ ಸೈಟ್ ನಂ. ೨೮೬/೨ ರಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಬಿಡಿಎ ಅಧಿಕಾರಿಗಳು ತೆರವುಗೊಳಿಸಿ ಸುಮಾರು ೧೮ ಗುಂಟೆ ಜಮೀನನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ ೨೫.೪೮ ಕೋಟಿ ರೂ. ಆಗಿದೆ.