
ಮೈಸೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಮಾಡಲಾಯಿತು.ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಎಂ.ಆರ್.ಹೊಯ್ಸಳ ಅಧಿಕಾರ ವಹಿಸಿಕೊಂಡರು. ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ, ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್‍ನ ನಾಗೇಶ್ ಕರಿಯಪ್ಪ, ಎಐಸಿಸಿ ಕಾರ್ಯದರ್ಶಿ ಖೈಷರ್, ಮೈಸೂರು ನಗರ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕೆ.ಆರ್.ಕ್ಷೇತ್ರದ ಬ್ಲಾಕ್ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ನವೀನ್ ಕುಮಾರ್, ಪ್ರದೀಪ್‍ಕುಮಾರ್, ಎನ್. ಆರ್.ನಾಗೇಶ್, ಮಾಜಿ ಮಹಾಪೌರ ಟಿ.ಬಿ.ಚಿಕ್ಕಣ್ಣ, ಪ್ರಚಾರ ಸಮಿತಿ ಅಧ್ಯಕ್ಷ ರಘುರಾಜ್, ಕೆಪಿಸಿಸಿ ಸಂಯೋಜಕರು ಶೌಕತ್ ಅಲಿ ಖಾನ್, ನಗರ ಸೇವಾದಳ ಅಧ್ಯಕ್ಷ ಅಶೋಕ್ ಹಾಗೂ ರಹೀಂ ಹಾಜರಿದ್ದರು.