
ರಾಷ್ಟ್ರೀಯ ಸ್ವಯಂಸೇವಾ ಸಂಘದ ಸರ ಕಾರ್ಯ ವಾಹನ ದತ್ತಾತ್ರೇಯ ಹೊಸ ಬಾಳೆಯವರು ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ ಹಾಗೂ ಸಮಾಜವಾದ ಪದವನ್ನು ತೆಗೆದು ಹಾಕಬೇಕೆಂಬ ದೇಶ ವಿರೋಧಿ ಹೇಳಿಕೆ ನೀಡಿರುವ ಹಿನ್ನೆಲೆ ಇವರನ್ನು ಬಂಧಿಸುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಮುಖಂಡರಾದ ಎ. ಆನಂದ್, ಪುಟ್ಟರಾಜು, ನವೀನ್ ಕುಮಾರ್, ಮತ್ತಿತರರು ದೂರು ಸಲ್ಲಿಸಿದರು.