ಸಿರುಗುಪ್ಪ, ಜೂ.24: ತಾಲೂಕಿನಲ್ಲಿ ತೆಕ್ಕಲಕೋಟೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿ ಭೇಟಿಗಾಗಿ ಬಂದಿದ್ದ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ತಾಲೂಕಿನ ನಿಟ್ಟೂರು ಅಶೋಕನ ಶಿಲಾಶಾಸನವನ್ನು ವೀಕ್ಷಿಸಿದರು ನಂತರ ಗ್ರಾಮದ ರೈತರೊಬ್ಬರ ಹೊಲದಲ್ಲಿ ಭತ್ತ ನಾಟಿ ಮಾಡುತ್ತಿದ್ದ ಮಹಿಳೆಯರೊಂದಿಗೆ ಸೇರಿ ತಾವು ಗದ್ದೆಗೆ ಇಳಿದು ಭತ್ತ ನಾಟಿ ಮಾಡಿ ಗಮನ ಸೆಳೆದಿದ್ದಾರೆ.