ಕಲಬುರಗಿ: ಸೇಡಂ ಜೆಸ್ಕಾಂ ಉಪವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶರಣಪ್ಪ ಮಲ್ಲಿಕಾರ್ಜುನ ಎಂಬುವವರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಇಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಜೆಸ್ಕಾಂ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಜಿಲ್ಲಾಧ್ಯಕ್ಷ ಸಂದೀಪ ಭರಣಿ,ಸತೀಶ ಕಡೂನ,ಪರ್ವತ,ವಿರೇಶ,ಫಿರೋಜ,ಶಾಂತು,ವಿಶ್ವನಾಥ ದೇಕೂನ ಸೇರಿದಂತೆ ಹಲವರಿದ್ದರು.