ಹನೂರು ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕೇಂದ್ರ ಕಛೇರಿ ಅವರಣದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಚಾ.ವಿ.ಸ.ನಿ.ನಿ ವಿಭಾಗ ಕಛೇರಿ ಕೊಳ್ಳೇಗಾಲ ರವರ ಅಧ್ಯಕ್ಷತೆಯಲ್ಲಿ ಇಂದು ಶನಿವಾರ “ಜನ ಸಂಪರ್ಕ ಸಭೆ” ನಡೆಯಿತು. ಈ ಸಭೆಯಲ್ಲಿ ಜೆ.ಇ ಗಳಾದ ವೆಂಕಟೇಶ್ ನಾಯ್ಡು, ಮಾದೇಶ್, ರಘುನಾಥ್, ಮಹೇಶ್, ವೆಂಕಟೇಶ್ ಮೂರ್ತಿ, ಮಾದೇವಸ್ವಾಮಿ ಸೇರಿದಂತೆ ಸಿಬ್ಬಂದಿಗಳು ಹಾಗೂ ರೈತರು ಸಂಘದ ಚಂಗಡಿ ಕರಿಯಪ್ಪ, ಅಮ್ಜದ್ ಖಾನ್ ಸೇರಿದಂತೆ ರೈತ ಮುಖಂಡರು ಸಾರ್ವಜನಿಕರು ಹಾಜರಿದ್ದರು.