
ಚಾಮರಾಜನಗರ ತಾಲೂಕಿನ ಹೊಂಡರಬಾಳು ಗ್ರಾಮದ ಸರ್ವೇ ನಂ 167 ರಲ್ಲಿ ದೊಡ್ಡರಾಯಪೇಟೆ ಗ್ರಾಮದ ಅನೇಕರಿಗೆ ದರಖಾಸ್ತು ಜಮೀನು ಮಂಜೂರು ಮಾಡಿದ್ದು, ಸಾಗುವಳಿ ಚೀಟಿ ಇದ್ದರು ಸಹ ಜಿಲ್ಲಾ ಹಾಗು ತಾಲೂಕು ಆಡಳಿತ ಹದ್ದುಬಸ್ತ್ ಗುರುತಿಸಿಕೊಡುವಲ್ಲಿ ವಿಫಲವಾಗಿದ್ದರು, ಅಧಿಕಾರಿಗಳ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ರೈತರೊಡಗೂಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪರಿಸರವಾದಿ ಪುಣಜನೂರು ದೊರೆಸ್ವಾಮಿ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಬಸವರಾಜು, ಮುಖಂಡರಾದ ಲೋಕೇಶ್, ಮಹದೇವಯ್ಯ, ಗೀರೀಶ್ ಇತರರು ಇದ್ದರು.